Assignment 8 quiz
- Get link
- X
- Other Apps
ಅಸೈನ್ಮೆಂಟ್ :- 8 ಪ್ರಶ್ನಾಕೋಶ.( Question bank ) ೧. ಭಾರತಕ್ಕೆ ಬಂದ ಮೊದಲ ಯುರೋಪಿಯನರು ಯಾರು? ಉತ್ತರ : ಪೋರ್ಚುಗೀಸರು ೨. ಭಾರತ ಬಿಟ್ಟು ಹೋದ ಕೊನೆಯ ಯುರೋಪಿಯನ್ನರು ಯಾರು? ಉತ್ತರ : ಪೋರ್ಚುಗೀಸರು. ೩. ಭಾರತಕ್ಕೆ ಜಲಮಾರ್ಗ ಕಂಡುಹಿಡಿದ ಮೊದಲ ನಾವಿಕ ಯಾರು? ಉತ್ತರ : ವಾಸ್ಕೋಡಿಗಾಮ. ೪. ನೀಲಿ ನೀರಿನ ನೀತಿ ಯಾರು ಜಾರಿ ತಂದರು? ಉತ್ತರ : ಫ್ರಾನ್ಸಿಸ್ಕೋ ಡಿ ಅಲ್ಮೇಡಾ. ೫. ಬಂಗಾಳದಲ್ಲಿ ದ್ವಿ ಪ್ರಭುತ್ವ ಪದ್ಧತಿ ಜಾರಿ ತಂದವರು ಯಾರು? ಉತ್ತರ : ರಾಬರ್ಟ್ ಕ್ಲೈವ್ ೬. ಒಂದನೇ ಕರ್ನಾಟಕ ಯುದ್ಧ ಯಾವ ಒಪ್ಪಂದದ ಕೊನೆಗೊಂಡಿತು? ಉತ್ತರ : ಎಕ್ಸ್ ಲಾ ಚಾಪೆಲ್ ಒಪ್ಪಂದ. ೭. ಎರಡನೇ ಕರ್ನಾಟಕ ಯುದ್ಧ ಯಾವ ಒಪ್ಪಂದ ದೊಂದಿಗೆ ಕೊನೆಗೊಂಡಿತು? ಉತ್ತರ : ಪಾಂಡಿಚೇರಿ ಒಪ್ಪಂದ. ೮ . ಮೂರನೇ ಕರ್ನಾಟಕ ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು ? ಉತ್ತರ : ಪ್ಯಾರಿಸ್ ಒಪ್ಪಂದ. ೯. ಬಾಕ್ಸರ್ ಕದನ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು? ಉತ್ತರ : ಅಲಹಾಬಾದ್ ಒಪ್ಪಂದ. ೧೦. ಒಂದನೇ ಆಂಗ್ಲೋ ಮೈಸೂರು ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು? ಉತ್ತರ : ಮದ್ರಸ್ ಒಪ್ಪಂದ. ೧೧. ಎರಡನೇ ಆಂಗ್ಲೋ ಮೈಸೂರು ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು ? ಉತ್ತರ : ಮಂಗಳೂರು ಒಪ್ಪಂದ. ೧೨. ಮೂರನೇ ಆಂಗ್ಲೋ ಮೈಸೂರು ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು? ಉತ್ತರ : ಶ್ರೀರಂಗಪಟ್ಟಣ ಒಪ್ಪಂದ. ೧೩. ಮೊದಲ ಆಂಗ್ಲೋ ಮರಾಠ ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು? ಉತ್ತರ : ಸಾಲ್ಬಾಯಿ ಒಪ್ಪಂದ. ೧೪. ಎರಡನೇ ಆಂಗ್ಲೋ ಮರಾಠ ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು? ಉತ್ತರ : ಬೆಸ್ಸಿನ್ ಒಪ್ಪಂದ. ೧೫. ಭಾರತದ ಮೊದಲ ವೈಸ್ರಾಯ್ ಯಾರು? ಲಾರ್ಡ್ ಕ್ಯಾನಿಂಗ್. ೧೬. ಬ್ರಹ್ಮ ಸಮಾಜ ಸ್ಥಾಪಕರು ಯಾರು? ರಾಜಾರಾಮ್ ಮೋಹನ್ ರಾಯ್. ೧೭. ಪ್ರಾರ್ಥನಾ ಸಮಾಜ ಸ್ಥಾಪಕ ಯಾರು? ಆತ್ಮರಾಮ್ ಪಾಂಡುರಂಗ. ೧೮. ಆರ್ಯ ಸಮಾಜದ ಸ್ಥಾಪಕರು ಯಾರು? ಸ್ವಾಮಿ ದಯಾನಂದ ಸರಸ್ವತಿ. ೧೯. ಸತ್ಯಶೋಧಕ ಸಮಾಜ ಸ್ಥಾಪಕ ಯಾರು? ಜ್ಯೋತಿ ಬಾಪುಲೆ. ೨೦. ಯುವ ಬಂಗಾಳಿ ಚಳುವಳಿಯ ಸ್ಥಾಪಕರು? ಹೆನ್ರಿ ವಿವಿಯನ್ ಡಿರೊಜಿಯೊ. ೨೧. ಅಲಿಘರ್ ಚಳುವಳಿಯ ಸ್ಥಾಪಕರು? ಸರ್ ಸಯ್ಯದ್ ಅಹಮದ್ ಖಾನ್. ೨೨. ರಾಮಕೃಷ್ಣ ಮಿಷನ್ ಸ್ಥಾಪಕರು ಯಾರು? ಸ್ವಾಮಿ ವಿವೇಕಾನಂದರು. ೨೩. ಪೇರಿಯರ್ ಚಳುವಳಿಯ ನಾಯಕರು ಯಾರು? ರಾಮಸ್ವಾಮಿ ನಾಯರ್. ೨೪. ಅಸ್ಪೃಶ್ಯತಾ ಅಪರಾಧ ಕಾಯ್ದೆ ಯಾವಾಗ ಜಾರಿಗೆ ಬಂತು? 1955 ರಲ್ಲಿ. ೩೫. ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಇರುವ ಸಂಸ್ಥೆ ಯಾವುದು? ಲೋಕಾಯುಕ್ತ. ೨೬. ಭಾರತದ ಅತಿ ಉದ್ದವಾದ ಅಣೆಕಟ್ಟು ಯಾವುದು? ಹಿರಕುಡ್ ಅಣೆಕಟ್ಟು. ೨೭. ಭಾರತದ ಅತಿ ಎತ್ತರವಾದ ಅಣೆಕಟ್ಟು ಯಾವುದು? ಬಾಕ್ರ ನಂಗಲ್ ಅಣೆಕಟ್ಟು. ೨೮. ಭಾರತದಲ್ಲಿ ಅತಿ ಹೆಚ್ಚು ಮಳೆಯಾಗುವ ಪ್ರದೇಶ ಯಾವುದು? ಮಾಸಿನ್ ರಾಮ್. ೨೯. ಭಾರತದಲ್ಲಿ ಅತಿ ಕಡಿಮೆ ಮಳೆಯಾಗುವ ಪ್ರದೇಶ ಯಾವುದು? ರಾಜಸ್ತಾನದ ರೂಯ್ಲಿ. ೩೦. ಭಾರತದಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾದ ಸ್ಥಳ ಯಾವುದು? ರಾಜಸ್ಥಾನದ ಗಂಗಾನಗರ. ೩೧. ವೇದಗಳಿಗೆ ಹಿಂತಿರುಗಿ ಇದು ಯಾರ ಘೋಷಣೆ? ಸ್ವಾಮಿ ದಯಾನಂದ ಸರಸ್ವತಿ. ೩೨. ಇಂಗ್ಲಿಷರಿಗೆ ದಿವಾನಿ ಹಕ್ಕು ಯಾರು ನೀಡಿದರು? ಎರಡನೇ ಷಾ ಅಲಂ. ೩೩. ಭಾರತ ಯಾವ ಮಾದರಿಯ ವಾಯುಗುಣ ಹೊಂದಿದೆ? ಉಷ್ಣವಲಯದ ಮಾನ್ಸೂನ್ ಮಾದರಿ. ೩೪. ಪ್ರಪಂಚದ ಅತ್ಯಂತ ಎತ್ತರವಾದ ಶಿಖರ ಯಾವುದು? ಮೌಂಟ್ ಎವರೆಸ್ಟ್. ೩೫. ಭಾರತದ ಅತ್ಯಂತ ಎತ್ತರವಾದ ಶಿಖರ ಯಾವುದು? ಮೌಂಟ್ ಕೆ2. ೩೬. ಭಾರತದ ಅತ್ಯಂತ ದಕ್ಷಿಣದ ತುದಿ ಯಾವುದು? ಇಂದಿರಾ ಪಾಯಿಂಟ್. ೩೭.ಭಾರತದ ಭೂಗಡಿ ಎಷ್ಟು ಉದ್ದವಾಗಿದೆ? 6100 km ೩೮. ಭಾರತದ ವಾಯುವ್ಯದಲ್ಲಿರುವ ದೇಶಗಳು ಯಾವುವು? ಪಾಕಿಸ್ತಾನ ಮತ್ತು ಅಪಘಾನಿಸ್ತಾನ. ೩೮. ಭಾರತದ ಉತ್ತರದಲ್ಲಿರುವ ದೇಶಗಳಾವುವು? ಚೈನಾ ನೇಪಾಳ ಮತ್ತು ಭೂತಾನ್. ೪೦. ಭಾರತದ ಪೂರ್ವದಲ್ಲಿರುವ ದೇಶಗಳಾವುವು? ಮಯನ್ಮಾರ್ ಮತ್ತು ಬಾಂಗ್ಲಾದೇಶ. ೪೧. ದಕ್ಷಿಣ ಭಾರತದ ಅತ್ಯಂತ ಎತ್ತರವಾದ ಶಿಖರ ಯಾವುದು? ಅನೈಮುಡಿ. ೪೨. ಭಾರತದ ಪ್ರಥಮ ಮಹಿಳಾ ಪ್ರಧಾನಮಂತ್ರಿ ಯಾರು? ಇಂದಿರಾಗಾಂಧಿ. ೪೩. ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ ಯಾರು? ಪ್ರತಿಭಾ ಸಿಂಗ್ ಪಾಟೀಲ್. ೪೪. ಭಾರತದ ಪ್ರಥಮ ಮಹಿಳಾ ರಾಜ್ಯಪಾಲರು ಯಾರು? ಸರೋಜಿನಿ ನಾಯ್ಡು. ೪೫. ಭಾರತದ ಪ್ರಥಮ ಮುಖ್ಯಮಂತ್ರಿ ಯಾರು? ಸುಚೇತಾ ಕೃಪಲಾನಿ. ೪೬. ಪಂಚಶೀಲ ಒಪ್ಪಂದ ಯಾರ ಯಾರ ನಡುವೆ ನಡೆಯಿತು? ಜವಾಹರ್ ಲಾಲ್ ನೆಹರೂ ಮತ್ತು ಚೌ ಎನ್ ಲಾಯ್. ೪೭. ಅಲಿಪ್ತ ನೀತಿಯ ಶಿಲ್ಪಿ ಯಾರು? ಜವಾಹರ್ ಲಾಲ್ ನೆಹರು. ೪೮. ಮಾನವ ಕುಲ ತಾನೊಂದೆ ವಲಂ ಎಂದು ಹೇಳಿದವರು ಯಾರು? ಆದಿಕವಿ ಪಂಪ. ೪೯. ಅಪ್ಪಿಕೋ ಚಳುವಳಿ ಯಾವ ರಾಜ್ಯದಲ್ಲಿ ನಡೆಯಿತು? ಕರ್ನಾಟಕದಲ್ಲಿ ೫೦. ಅಪ್ಪಿಕೋ ಚಳುವಳಿ ಯಾವ ಜಿಲ್ಲೆಯಲ್ಲಿ ನಡೆಯಿತು? ಉತ್ತರ ಕನ್ನಡ ಜಿಲ್ಲೆಯ ಬಿರ್ಯಾನಿ ಎಂಬ ಗ್ರಾಮದಲ್ಲಿ. ೫೧. ಚಿಪ್ಕೋ ಚಳುವಳಿಯ ನೇತೃತ್ವ ವಹಿಸಿದ್ದರು ಯಾರು? ಸುಂದರಲಾಲ್ ಬಹುಗುಣ ಮತ್ತು ಚಂಡಿ ಪ್ರಸಾದ ಭಟ್ಕಾ. ೫೨. ನರ್ಮದಾ ಬಚಾವೋ ಆಂದೋಲನದ ನೇತೃತ್ವ ವಹಿಸಿದವರು ಯಾರು? ಮೇಧಾ ಪಾಟ್ಕರ್ ಮತ್ತು ಬಾಬಾ ಅಮ್ಟೆ. ೫೩. ಕೈಗಾ ಅಣುಸ್ಥಾವರ ಯಾವ ಜಿಲ್ಲೆಯಲ್ಲಿದೆ? ಕರ್ನಾಟಕದ ಕಾರವಾರ ಜಿಲ್ಲೆ? ೫೪. ಕೈಗಾ ವಿರುದ್ಧ ಚಳುವಳಿಯ ನೇತೃತ್ವ ವಹಿಸಿದ ಪ್ರಖ್ಯಾತ ಕನ್ನಡ ಸಾಹಿತಿ ಯಾರು ? ಡಾಕ್ಟರ ಕೆ ಶಿವರಾಮ ಕಾರಂತ. ೫೫. MRPL ವಿಸ್ತರಿಸಿ. ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್. ೫೬. ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿಗೆ ಬಂದ ವರ್ಷ ಯಾವುದು? 1986. ೫೭. ಹೆಣ್ಣು ಭ್ರೂಣ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ವರ್ಷ ಯಾವುದು? 1994. ೫೮. ದಿನಕ್ಕೆ ಎಷ್ಟು ಬಾರಿಯಾದರೂ ವಿವರಿಸಬಹುದು ಆದ ಕಥೆ ಯಾವುದು? ಚಾಲ್ತಿ ಖಾತೆ. ೫೯. ಬಿಳಿ ಕ್ರಾಂತಿಯ ಪಿತಾಮಹ ಯಾರು? ವರ್ಗೀಸ್ ಕುರಿಯನ್. ೬೦. ರಾಷ್ಟ್ರೀಯ ಉಳಿತಾಯ ಪತ್ರ ಯಾವ ಇಲಾಖೆ ನೀಡುತ್ತದೆ? ಅಂಚೆ ಇಲಾಖೆ. ೬೧. ಪ್ರತ್ಯೇಕ ಚುನಾವಣಾ ಮತಗಟ್ಟೆ ಜಾರಿಗೆ ತಂದ ಶಾಸನ ಯಾವುದು? 1909 ರ ಭಾರತೀಯ ಕಾಯ್ದೆ. ೬೨. ದಿವಾನಿ ಅದಾಲತ್ ಮತ್ತು ಹೋದರೆ ಅದರ ನ್ಯಾಯಾಲಯ ಯಾರು ಜಾರಿಗೆ ತಂದರು? ವಾರನ್ ಹೇಸ್ಟಿಂಗ್ಸ್. ೬೩. ಎಸ್ಪಿ ಹುದ್ದೆಯನ್ನು ಯಾರು ಸೃಷ್ಟಿಸಿದರು? ಲಾರ್ಡ್ ಕಾರ್ನ್ವಾಲಿಸ್. ೬೪. ಭಾರತದಲ್ಲಿ ಅತಿ ಹೆಚ್ಚು ಚಳಿ ಎಲ್ಲಿ ದಾಖಲಾಗಿದೆ? ಕಾರ್ಗಿಲ್ ಹತ್ತಿರ ಡ್ರಾಸ್. ೬೫. ಮರಾಠರ ಕೊನೆಯ ಪೇಶ್ವೆ ಯಾರು? ನಾನಾ ಸಾಹೇಬ. ೬೬. ಭಾರತದಲ್ಲಿ ಅತಿ ಹೆಚ್ಚು ಅರಣ್ಯ ಹೊಂದಿದ ರಾಜ್ಯ ಯಾವುದು? ಮಧ್ಯ ಪ್ರದೇಶ್. ೬೭. ಭಾರತದಲ್ಲಿ ಅತಿ ಕಡಿಮೆ ಅರಣ್ಯ ಹೊಂದಿದ ರಾಜ್ಯ ಯಾವುದು? ಗೋವಾ. ೬೮. ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ರಾಜ್ಯ ಯಾವುದು? ಉತ್ತರ ಪ್ರದೇಶ್. ೬೯. ಭಾರತದಲ್ಲಿ ಅತಿ ಕಡಿಮೆ ಜನಸಂಖ್ಯೆ ರಾಜ್ಯ ಯಾವುದು. ಸಿಕ್ಕಿಂ. ೭೦. ಭಾರತದಲ್ಲಿ ಅತಿ ಹೆಚ್ಚು ವಿಸ್ತೀರ್ಣ ಹೊಂದಿದ ರಾಜ್ಯ ಯಾವುದು? ರಾಜಸ್ಥಾನ. ೭೧. ಭಾರತದಲ್ಲಿ ಅತಿ ಕಡಿಮೆ ವಿಸ್ತೀರ್ಣ ಹೊಂದಿದ ರಾಜ್ಯ ಯಾವುದು? ಗೋವಾ. ೭೨. ಪಾನೀಯ ಬೆಳೆಗಳ ಹೆಸರಿಸಿ? ಚಹಾ, ಕಾಫಿ. ೭೩. ನಾರಿನ ಬೆಳೆಗಳು ಯಾವುವು? ಹತ್ತಿ ಮತ್ತು ಸೆಣಬು. ೭೪. ಗೋವಿಂದ ಸಾಗರ ಎಂದು ಯಾವ ಅಣೆಕಟ್ಟನ್ನು ಕರೆಯುವರು? ಬಾಕ್ರ ನಂಗಲ್ ಅಣೆಕಟ್ಟು. ೭೫. ಪಂಪ ಸಾಗರ ಎಂದು ಯಾವ ಅಣೆಕಟ್ಟನ್ನು ಕರೆಯುವರು? ತುಂಗಭದ್ರಾ ಜಲಾಶಯ. ೭೬. ಕರ್ನಾಟಕದ ಅತಿ ದೊಡ್ಡ ನದಿ ಕಣಿವೆ ಯೋಜನೆ ಯಾವುದು? ಕೃಷ್ಣ ಮೇಲ್ದಂಡೆ ಯೋಜನೆ. ೭೭. ಬ್ಯಾಂಕುಗಳ ಬ್ಯಾಂಕು ಎಂದು ಯಾವ ಬ್ಯಾಂಕನ್ನು ಕರೆಯುವರು? ಭಾರತೀಯ ರಿಸರ್ವ್ ಬ್ಯಾಂಕ್. ೭೮. ಸಹಾಯಕ ಸೈನ್ಯ ಪದ್ದತಿಯನ್ನು ಯಾರು ಜಾರಿಗೆ ತಂದರು? ಲಾರ್ಡ ವೆಲ್ಲೆಸ್ಲಿ. ೭೯. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತಂದವರು ಯಾರು? ಲಾರ್ಡ ಡಾಲಹೌಸಿ. ೮೦. ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮೊದಲ ದೇಶಿಯ ದೊರೆ ಯಾರು? ಹೈದರಾಬಾದಿನ ನಿಜಾಮ ೮೧. ಸಿಖ್ಖರ ಸೋಲಿಗೆ ಕಾರಣವಾದ ಅವಮಾನಕರ ಒಪ್ಪಂದ ಯಾವುದು? ಲಾಹೋರ್ ಒಪ್ಪಂದ. ೮೨. ಲಾರ್ಡ್ ವೆಲ್ಲೆಸ್ಲಿ ರಾಜೀನಾಮೆ ನೀಡಲು ಕಾರಣ ಏನು? ಅವನ ಯುದ್ಧ ಪ್ರಿಯೆ ನೀತಿಯಿಂದ ಕಂಪನಿಗೆ ಆದ ಸಾಲದ ಹೊರೆ. ೮೩. ವಿದೇಶಾಂಗ ನೀತಿ ಎಂದರೇನು? ಒಂದು ದೇಶ ಅನ್ಯರಾಷ್ಟ್ರಗಳೊಂದಿಗೆ ವ್ಯವಹರಿಸುವಾಗ ಅನುಸರಿಸುವ ನೀತಿ. ೮೪. ಅಲಿಪ್ತ ನೀತಿ ಎಂದರೇನು? ವಿಶ್ವದ ಯಾವುದೇ ಬಣಕ್ಕೂ ಸೇರದೆ ಇರುವ ನೀತಿ. ೮೫. ಕೋಮುವಾದ ಎಂದರೇನು? ಅನ್ಯ ಧರ್ಮದ ಬಗ್ಗೆ ಸೈರಣಿ ಇಲ್ಲದಿರುವುದು. ೮೬. ಆಫ್ರಿಕಾದ ಗಾಂಧಿ ಎಂದು ಯಾರನ್ನು ಕರೆಯುವರು? ನೆಲ್ಸನ್ ಮಂಡೇಲಾ. ೮೭. ಭಾರತ ಮತ್ತು ಪಾಕಿಸ್ತಾನ ಮಧ್ಯೆ ನಡೆದ ತಾಷ್ಕೆಂಟ್ ಒಪ್ಪಂದಕ್ಕೆ ಯಾವ ದೇಶ ಸಹಕರಿಸಿತು? ರಷ್ಯಾ. ೮೮. ಶಿಕ್ಷಣ ಸಾರ್ವಜನಿಕರ ಸ್ವತ್ತಾಗಬೇಕು ಎಂದು ಹೇಳಿದವರು ಯಾರು? ಡಾಕ್ಟರ್ ಬಿಆರ್ ಅಂಬೇಡ್ಕರ್. ೮೯. ಭಾರತದ ನೈಜ ಅಭಿವೃದ್ಧಿಯೆಂದರೆ ಗ್ರಾಮಗಳ ಅಭಿವೃದ್ಧಿ ಎಂದು ಹೇಳಿದವರು ಯಾರು? ಮಹಾತ್ಮ ಗಾಂಧೀಜಿ. ೯೦. ಏಕರೂಪದ ಪಂಚಾಯತ್ ರಾಜ್ ವ್ಯವಸ್ಥೆ ಯಾವಾಗ ಜಾರಿ ಬಂತು? 1993 ರಲ್ಲಿ. ೯೧. 2011ರ ಜನಗಣತಿ ಪ್ರಕಾರ ಭಾರತದ ಲಿಂಗಾನುಪಾತ ಎಷ್ಟಿತ್ತು? 945. ೯೨. ಕಪ್ಪು ಮಣ್ಣಿನಲ್ಲಿ ಬೆಳೆಯುವ ಪ್ರಮುಖ ಬೆಳೆ ಯಾವುದು? ಹತ್ತಿ. ೯೩. ಚಹಾ ಮತ್ತು ಕಾಫಿ ಬೆಳೆಗೆ ಯಾವ ಮಣ್ಣು ಸೂಕ್ತವಾಗಿದೆ? ಪರ್ವತ ಮಣ್ಣು. ೯೪. ಕಪ್ಪು ಮಣ್ಣು ಹೇಗೆ ಉತ್ಪತ್ತಿಯಾಗಿದೆ? ಬಸಲ್ಟ್ ಶಿಲೆಗಳ ಚಿತ್ರೀಕರಣದಿಂದ. ೯೫. ಕೆಂಪು ಮಣ್ಣು ಹೇಗೆ ಉತ್ಪತ್ತಿಯಾಗಿದೆ? ಗ್ರಾನೈಟ್ ಮತ್ತು ಸ್ಪಟಿಕ ಶಿಲೆಗಳ ಚಿತ್ರೀಕರಣದಿಂದ. ೯೬. ಅತ್ಯಂತ ಶೀತ ಮಯ ವಾತಾವಣ ಹೊಂದಿದ ತಿಂಗಳು ಯಾವುದು? ಜನವರಿ ತಿಂಗಳು. ೯೭. ಭಾರತದಲ್ಲಿ ಅತಿ ಕಡಿಮೆ ಮಳೆಯಾಗುವ ಋತುಮಾನ ಯಾವುದು? ಚಳಿಗಾಲ. ೯೮. ಭಾರತದ ಪಂಚವಾರ್ಷಿಕ ಜನಗಳಿಗೆ ಸಹಾಯ ನೀಡಿದ ದೇಶ ಯಾವುದು? ಅಮೆರಿಕ ೯೯. 1961 ರ ಗೋವಾ ವಿಮೋಚನೆಗೆ ನೆರವು ನೀಡಿದ ದೇಶ ಯಾವುದು? ರಷ್ಯಾ. ೧೦೦. ಸ್ತ್ರೀ ಶಕ್ತಿ ಕಾರ್ಯಕ್ರಮದ ಉದ್ದೇಶವೇನು? ಗ್ರಾಮಾಂತರ ಮಹಿಳೆಯರ ವಿಕಾಸ ಮಾಡುವುದಾಗಿದೆ. ೧೦೧. ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳ ವಿಭಜನೆ ಯಾದದ್ದು ಯಾವಾಗ? 1953ರಲ್ಲಿ. ೧೦೨. ಶ್ವೇತ ಸರಸ್ವತಿ ಎಂದು ಯಾರನ್ನು ಕರೆಯುತ್ತಾರೆ? ಅನಿಬೆಸೆಂಟ್. ೧೦೩. ಗುಲಾಮಗಿರಿ ಪುಸ್ತಕ ಯಾರು ಬರೆದರು? ಜ್ಯೋತಿ ಬಾಪುಲೆ. ೧೦೩ ಸತ್ಯಾರ್ಥ ಪ್ರಕಾಶ ಪುಸ್ತಕ ಯಾರು ಬರೆದರು? ದಯಾನಂದ್ ಸರಸ್ವತಿ. ೧೦೩. ಗೋ ರಕ್ಷಣಾ ಸಂಘ ಯಾರು ತೆರೆದರು? ದಯಾನಂದ ಸರಸ್ವತಿ. ೧೦೪. ದ್ರಾವಿಡ ಕಳಗಂ ಸಂಘಟನೆಯ ರೂವಾರಿ ಯಾರು? ಪೆರಿಯರ್. ೧೦೫. ಪರಿಯರ್ ಚಳುವಳಿಯ ಮುಖ್ಯ ಉದ್ದೇಶವೇನು? ಜನಾಂಗೀಯ ತಾರತಮ್ಯವನ್ನು ಹೋಗಲಾಡಿಸುವುದು. ೧೦೬. ಸುರಪುರ ಬಂಡಾಯದ ನಾಯಕ ಯಾರು? ವೆಂಕಟಪ್ಪ ನಾಯಕ. ೧೦೭. ಕೊಪ್ಪಳ ಬಂಡಾಯದ ನಾಯಕ ಯಾರು? ವೀರಪ್ಪ. ೧೦೮. ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ ಯಾವುದು? ನಂದಗಡ. ೧೦೯. ಅಖಿಲ ಭಾರತ ಒಕ್ಕೂಟ ವ್ಯವಸ್ಥೆ ವ್ಯವಸ್ಥೆಗೆ ಅವಕಾಶ ಮಾಡಿಕೊಟ್ಟ ಶಾಸನ ಯಾವುದು? 19 35ರ ಕಾಯ್ದೆ ೧೧೦. ಅಪರಾಧ ತೆರಿಗೆ ಟೀಕಿಸಿದವರು ಯಾರು? ಎಡ್ಮಂಡ್ ಬರ್ಕ್. ೧೧೧. ಖಾಯಂ ಜಮೀನ್ದಾರಿ ಪದ್ದತಿಯನ್ನು ಜಾರಿಗೆ ತಂದವರು ಯಾರು? ಲಾರ್ಡ್ ಕಾರ್ನ್ವಾಲಿಸ್. ೧೧೨. ರೈತವಾರಿ ಪದ್ಧತಿಯನ್ನು ಜಾರಿಗೆ ತಂದವರು ಯಾರು? ಅಲೆಗ್ಸಾಂಡರ್ ರೀಡ್. ೧೧೪. ಹಿಂದುಸ್ತಾನ ದಲ್ಲಿರುವ ಪ್ರತಿಯೊಬ್ಬ ಮೂಲನಿವಾಸಿ ಭ್ರಷ್ಟ ಎಂದು ಹೇಳಿದವರು ಯಾರು? ಲಾರ್ಡ್ ಕಾರ್ನ್ವಾಲಿಸ್. ೧೧೫. ಕಾಫಿ ಹೂ ಮಳೆ ಯಾವ ರಾಜ್ಯದಲ್ಲಿ ಬೀಳುತ್ತದೆ? ಕರ್ನಾಟಕದಲ್ಲಿ. ೧೧೬. ಕಾಲ ಬೈಸಾಕಿ ಮಳೆ ಯಾವ ರಾಜ್ಯದಲ್ಲಿ ಬೀಳುತ್ತದೆ? ಪಶ್ಚಿಮ ಬಂಗಾಳ. ೧೧೮. ಅಪೋಲೋ ವೈದ್ಯಶಾಲೆ ಆರಂಭ ಮಾಡಿದವರು ಯಾರು? ಡಾಕ್ಟರ್ ಪ್ರತಾಪ್ ರೆಡ್ಡಿ. ೧೧೯. ಜೆಟ್ ವಾಯು ಮಾರ್ಗ ಆರಂಭಿಸಿದವರು ಯಾರು? ನರೇಶ್ ಗೊಯಲ್. ೧೨೦. ಇನ್ಫೋಸಿಸ್ ಸಂಸ್ಥೆ ಯನ್ನು ಸ್ಥಾಪಿಸಿದವರು ಯಾರು? ನಾರಾಯಣಮೂರ್ತಿ. ೧೨೧. ರಿಲಯನ್ಸ್ ಸಂಸ್ಥೆಯ ಸ್ಥಾಪಕರು ಯಾರು? ದೀರುಬಾಯಿ ಅಂಬಾನಿ. ೧೨೨. ವಿಪ್ರೋ ಸಂಸ್ಥೆಯ ಸ್ಥಾಪಕರು ಯಾರು? ಅಜೀಮ್ ಪ್ರೇಮ್ಜಿ. ೧೨೩. ದೂರದರ್ಶನ ಕ್ಷೇತ್ರದಲ್ಲಿ ಅಧಿಪತ್ಯ ಸ್ಥಾಪಿಸಿದವರು ಯಾರು? ಎಕ್ತ ಕಪೂರ್. ೧೨೪. ಬಯೋಕಾನ್ ನಿಗಮದ ಸ್ಥಾಪಕರು ಯಾರು? ಕಿರಣ ಮಜುಂದರ್ ಷಾ. ೧೨೫. ಕನ್ನಡದ ಮೊದಲ ವರ್ತಮಾನ ಪತ್ರಿಕೆ ಯಾವುದು? ಮಂಗಳೂರು ಸಮಾಚಾರ. ೧೨೬. ವಿಶ್ವ ಆರೋಗ್ಯ ಸಂಸ್ಥೆಯ ಪ್ರಮುಖ ಸಾಧನೆ ಯಾವುದು? ಸಿಡುಬು ರೋಗ ನಿರ್ಮೂಲನೆ. ೧೨೭. ಸಾರ್ಕ್ ಕೇಂದ್ರ ಕಛೇರಿ ಎಲ್ಲಿದೆ? ನೇಪಾಳದ ಕಠ್ಮಂಡು. ೧೨೮. ಅಂತರಾಷ್ಟ್ರೀಯ ನ್ಯಾಯಾಲಯದ ಕೇಂದ್ರ ಕಚೇರಿ ಎಲ್ಲಿದೆ? ನೆದರ್ಲ್ಯಾಂಡ್ ನ ಹೇಗ್. ೧೨೯. ವಿಶ್ವಸಂಸ್ಥೆಯ ಕೇಂದ್ರ ಕಚೇರಿ ಎಲ್ಲಿದೆ? ನ್ಯೂಯಾರ್ಕ್ ನಲ್ಲಿದೆ. ೧೩೦. FAO ಕೇಂದ್ರ ಕಚೇರಿ ಎಲ್ಲಿದೆ? ರೋಮ್ ದಲ್ಲಿದೆ. ೧೩೧. ಹೋಲೋಕಾಸ್ಟ ಎಂದರೇನು? ಹಿಟ್ಲರ್ ನಡೆಸಿದ ಸಾಮೂಹಿಕ ಕಗ್ಗೊಲೆ. ೧೩೨. ಹಿಟ್ಲರ್ ಸ್ಥಾಪಿಸಿದ ರಾಜಕೀಯ ಪಕ್ಷ ಯಾವುದು? ನಾಝಿ ಪಡೆ. ೧೩೩. ಭಾರತದ ಅತಿ ಉದ್ದವಾದ ರಾಷ್ಟ್ರೀಯ ಹೆದ್ದಾರಿ ಯಾವುದು? NH 7. ೧೩೪. ಭಾರತದ ಮ್ಯಾಂಚೆಸ್ಟರ್ ಯಾವುದು? ಮುಂಬೈ. ೧೩೫. ಪ್ರಪಂಚದಲ್ಲಿ ಅತಿ ಹೆಚ್ಚು ಅಭ್ರಕ ಉತ್ಪಾದಿಸುವ ದೇಶ ಯಾವುದು? ಭಾರತ. ರಚನೆ :- ಶ್ರೀ ಹೊನ್ನೂರಪ್ಪ . ಸಹ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಕಲ್ಲಖೋರ ತಾ/ ಬಸವಕಲ್ಯಾಣ ಜಿ/ ಬೀದರ್
ಅಸೈನ್ಮೆಂಟ್ 8. ಪ್ರಶ್ನಾಕೋಠಿ.txt
- Get link
- X
- Other Apps
Comments
Post a Comment