ASSIGNMENT 9 PROFESIONAL DEVELOPMENT

                                     ಅಸೈನ್ಮೆಂಟ್ 9
ಮನೆಯಿಂದಲೇ ಕೆಲಸ ದಡಿಯಲ್ಲಿ ಶಿಕ್ಷಕರು ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವ ಕುರಿತಂತೆ 400  ಪದಗಳ ಲೇಖನ.
ಪೀಠಿಕೆ :-
            " ಕಲಿಕೆ ಎನ್ನುವುದು ನಿಂತ ನೀರಲ್ಲ ಅದು ಹರಿಯುವ ನದಿಯಂತೆ ಹಾಗೆಯೇ ವಿದ್ಯೆ ಎಂಬುದು ಎಂದಿಗೂ ಮುಗಿಯದ ಅಧ್ಯಾಯ ಅದೊಂದು ನಿರಂತರ ಪ್ರಕ್ರಿಯೆ" ಎನ್ನುವ ನುಡಿಯು ಕಲಿಕೆಯ ಮಹತ್ವವನ್ನು ಸಾರುತ್ತದೆ. ಶಿಕ್ಷಕ ಯಾವಾಗಲೂ ಸಮಾಜವನ್ನು ತಿದ್ದುವ, ದೇಶವನ್ನು ಕಟ್ಟುವ ನಿರ್ಮಾತೃ , ಇಂತಹ ಶಿಕ್ಷಕನ ಕಲಿಕೆಯು ಕ್ಷಣಿಕವಾಗಿ ನಿಂತರೆ ಮಮುಂದಿನ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ. ಹಾಗಾಗಿ ಒಬ್ಬ ಶಿಕ್ಷಕ ಯಾವಾಗಲೂ ವಿದ್ಯಾರ್ಥಿಯಾಗಿರುತ್ತಾನೆ. 
       ಮಕ್ಕಳ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ಹಿರಿದು. ಮಕ್ಕಳಿಗೆ ಬೋಧಿಸುವುದು ಒಂದು ಕಲೆ. ಶಿಕ್ಷಕರು ಈ ಕಲೆಯಲ್ಲಿ ಪರಿಣಿತರಾಗಬೇಕು ಮಾನವನು ಇಂದಿನವರೆಗೂ ಕಳಿಸಿದ ಜ್ಞಾನ ಅಪಾರವಾದದ್ದು ಅದನ್ನು ಒಟ್ಟುಗೂಡಿಸಿ ಮಕ್ಕಳಿಗೆ ತಿಳಿ ಹೇಳಬೇಕಾದರೆ ಶಿಕ್ಷಕನ ನೈಪುಣ್ಯತೆ ಪರಿಪಕ್ವ ವಾಗಿರಬೇಕು.  ಶಿಕ್ಷಕನು ಆಡಳಿತಗಾರನಾಗಿ, ಬೋಧಕರಾಗಿ, ಮಾರ್ಗದರ್ಶಕನಾಗಿ, ಮೇಲ್ವಿಚಾರಕನಾಗಿ, ಸ್ನೇಹಿತನಾಗಿ,ಸಮಾಜ ಸೇವಕನಾಗಿ ವಿವಿಧ ಬಹುಮುಖ ಪ್ರತಿಭೆ ಉಳ್ಳ ಪಾತ್ರ ನಿರ್ವಹಿಸುವನಾಗಿರುವನು.
ವಿವರಣೆ :-
       ವೃತ್ತಿ ನೈಪುಣ್ಯತೆ ಸಾಮರ್ಥ್ಯವು ವೃತ್ತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದರ ಮುಖಾಂತರ ಬೆಳವಣಿಗೆ ಹೊಂದುವ ಜ್ಞಾನದಾಹವನ್ನು ನೀಗಿಸಿಕೊಳ್ಳಲು ಓದುವ, ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವ ವಿನೂತನವಾದ ಚಟುವಟಿಕೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ, ಸೂಪರ್ ರೀತಿಯಲ್ಲಿ ಇತರರಿಗೆ ಮಾರ್ಗದರ್ಶನ ಮತ್ತು ಸಲಹೆ ನೀಡುವುದರೊಂದಿಗೆ ಇನ್ನಿತರ ಚಟುವಟಿಕೆಗಳಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸುವ ಮತ್ತು  ಸಮಾಜಕ್ಕೆ ತನ್ನ ವೃತ್ತಿಯಿಂದ ಸಕರಾತ್ಮಕ ಕೊಡುಗೆ ನೀಡುವ ಸಾಮರ್ಥ್ಯವಾಗಿದೆ.
       ಶಿಕ್ಷಕನ ವೃತ್ತಿ ಜೀವನವು ಮಗುವಿನೊಂದಿಗೆ ಪ್ರಾರಂಭವಾಗಿ ಮಗುವಿನಲ್ಲಿ ಸಾಫಲ್ಯತೆ ಪಡುವಂಥದ್ದು ಕಾಲ ಬದಲಾದಂತೆ  ನಾವು ಬದಲಾಗಬೇಕು ಕಾಲಕ್ಕೆ ಸರಿಯಾಗಿ ನಾವು ಮುಂದೆ ಸಾಗುತ್ತೇವೆ. ಅದೇ ನಮಗೆ ಜೀವನದಲ್ಲಿ ಪಾಠ ಕಲಿಸುತ್ತದೆ. ಇತ್ತೀಚಿಗೆ ನಮ್ಮನ್ ಎಲ್ಲರನ್ನೂ ಕಾಡುತ್ತಿರುವ ಭಯ ಕೊರೊನಾ ವೈರಸ್ ನದ್ದು ಈ ಕಾಯಿಲೆಯ ಭೀತಿ ಜನ-ಜೀವನದ ಶೈಲಿಯನ್ನೇ ಬದಲಾಯಿಸಿಬಿಟ್ಟಿದೆ. ಇವುಗಳ ಮಧ್ಯೆ ಸವಾಲು ಎದುರಿಸುತ್ತಿರುವ ನಾವುಗಳು / ಶಿಕ್ಷಕರು ಆಧುನಿಕ ತಂತ್ರಜ್ಞಾನದ ಮೂಲಕ ಕಾರ್ಯಪ್ರವೃತ್ತರಾಗಬೇಕಾಗಿದೆ.
       ಕಾಲ ಒಂದೇ ರೀತಿ ಇರಲಾರದು, ನಾವು ಆಶಾವಾದಿಗಳಾಗಿ ಇದ್ದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ನಮ್ಮ ವೃತ್ತಿ ನೈಪುಣ್ಯತೆಯೊಂದಿಗೆ ಭವಿಷ್ಯತ್ತಿನ ಭವ್ಯ ಭಾರತಕ್ಕೆ ಭದ್ರಬುನಾದಿ ಹಾಕೋಣ. ಸರ್ಕಾರದ ಯೋಜನೆಗಳು, ನೀತಿಗಳು ಮತ್ತು  ಭವಿಷ್ಯದ ಸವಾಲುಗಳನ್ನು ಎದುರಿಸುವ ಸೂಕ್ತ ಸಾಮರ್ಥ ಹೊಂದೋಣ.
      ಶಿಕ್ಷಕರು ಮಕ್ಕಳ ಆಸಕ್ತಿ,ಮನೊಭಾವ, ವರ್ತನೆ  ಕಲಿಕಾ ಸಾಮರ್ಥ್ಯ ಅವರ ಸಾಮಾಜಿಕ-ಆರ್ಥಿಕ ಹಿನ್ನೆಲೆಯನ್ನು ಅರಿತು ಚಟುವಟಿಕೆಗಳನ್ನು ರೂಪಿಸಿಕೊಳ್ಳಬೇಕು. ಹೊಟ್ಟೆಯಲ್ಲಿ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಸಹಾಯಕವಾಗುವ  ಅಂಶಗಳತ್ತ ಗಮನ ಹರಿಸಬೇಕು.
         ****   ವೃತ್ತಿ ನೈಪುಣ್ಯತೆ  ಹೆಚ್ಚಿಸುವ ಅಂಶಗಳು ****
* ವಿಷಯ ಪಾಂಡಿತ್ಯ ಪಡೆಯಬೇಕು.
* ನಿರಂತರ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು.
*  ಬೋಧನಾ ವಿಧಾನ / ತಂತ್ರಗಳ ಅರಿವು ಪಡೆಯಬೇಕು.
* ವೃತ್ತಿ ತರಬೇತಿ / ಪುನಶ್ಚೇತನ ತರಬೇತಿಯಲ್ಲಿ ತೊಡಗಿಸಿಕೊಳ್ಳಬೇಕು.
* ಸಮಯ ಪ್ರಜ್ಞೆಯೊಂದಿಗೆ ತಾಳ್ಮೆ ಮತ್ತು ಧೈರ್ಯ ಹೊಂದಬೇಕು.
* ಉತ್ಸಾಹಿ ಆತ್ಮವಿಶ್ವಾಸಿ ಯಾಗಿ  ಕತೆ, ನಾಟಕ, ಕಾದಂಬರಿ, ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡು ಸಾಹಿತ್ಯ ಅಭಿರುಚಿ ಹೊಂದಬೇಕು.
* ಶಿಕ್ಷಕರ ಕೈಪಿಡಿ ಬಳಕೆಯೊಂದಿಗೆ ಕೃಷ್ಣ ಅಂಶಗಳು ಕರಗತಗೊಳಿಸಬೇಕು.
* ಗ್ರಂಥಾಲಯ ಪುಸ್ತಕಗಳ ಸದ್ಬಳಕೆಯೊಂದಿಗೆ ನಿರಂತರ ಅಭ್ಯಾಸದಲ್ಲಿ ತೊಡಗುವುದು.
* ಕ್ರೀಡೆಯಲ್ಲಿ ಅಭಿರುಚಿ ಹೊಂದುವುದು.
* ಪಾಠೋಪಕರಣ ಮತ್ತು ಬೋಧನೋಪಕರಣ ತಯಾರಿಕೆ.
* ಸಂಶೋಧನಾತ್ಮಕ ಮತ್ತು ವಿಮರ್ಶಾತ್ಮಕ ದೃಷ್ಟಿಕೋನಕ್ಕೆ ಪ್ರಯೋಗಗಳ ಅನುಷ್ಠಾನ.
* ಕಸದಲ್ಲಿ ರಸ ಹುಡುಕುತ್ತಾ ಕ್ರಾಫ್ಟ್ ನಲ್ಲಿ ತೊಡಗಿಸಿಕೊಳ್ಳುವಿಕೆ.
* ಯೋಗ ಮತ್ತು ವ್ಯಾಯಾಮದ ಕುರಿತು ಜ್ಞಾನ ಬೆಳೆಸಿಕೊಳ್ಳುವುದು.
* . ಹವ್ಯಾಸ ವೃದ್ಧಿಗಾಗಿ ನೃತ್ಯ ಸಂಗೀತ ಮತ್ತು ಚಿತ್ರಕಲೆ ಬಿಡಿಸುವುದು.
* ಆರೋಗ್ಯವಂತ ವ್ಯಕ್ತಿತ್ವಕ್ಕೆ ಜೀವನ ಕೌಶಲ್ಯ & ಮೌಲ್ಯಪ್ರಜ್ಞೆ ಹೊಂದಬೇಕು.
* ಸಕರಾತ್ಮಕ ಹಾಸ್ಯ ಪ್ರವೃತ್ತಿ ಗಾಗಿ ವಿಚಾರಗೋಷ್ಠಿಗಳ ಅವಲೋಕನ.
* ವಿವಿಧ ಕ್ಷೇತ್ರಗಳ ಕುರಿತು ಅರಿವು ಹೊಂದುವುದು.
* ನಿಸರ್ಗದ ಕುರಿತು ಅಧ್ಯಯನದಲ್ಲಿ ತೊಡಗುವುದು.
* ವಿಷಯದ ಪಾಂಡಿತ್ಯಕ್ಕೆ ಆಡಿಯೋ ವಿಡಿಯೋಗಳು ಸಂಗ್ರಹ.
* ಅರ್ಪಣಾ ಮನೋಭಾವದೊಂದಿಗೆ ಮಕ್ಕಳಿಗೆ ಮಾರ್ಗದರ್ಶನ ಮತ್ತು ಸಲಹೆ.
* ರೇಡಿಯೋ ದೂರದರ್ಶನ ಅಂತರ್ಜಾಲದ ಸದ್ಬಳಕೆ ಮಾಡುವುದು.
* ತಂತ್ರಜ್ಞಾನದ ಬಳಕೆಯ ಮೂಲಕ ದಾಖಲೆಗಳನ್ನು ಪ್ರಸ್ತುತಪಡಿಸುವುದು.
* ಶಿಕ್ಷಕ ತನ್ನ ಬೌದ್ಧಿಕ ಸಾಮರ್ಥ್ಯ ವಿಕಸನಕ್ಕಾಗಿ ದಿನಪತ್ರಿಕೆಗಳು, ವಿವಿಧ ಲೇಖನಗಳು ಅಧ್ಯಯನದಲ್ಲಿ ತೊಡಗಿಸಿಕೊಳ್ಳುವುದು.
* ವಿಜ್ಞಾನದ  ಸರಳ ಪ್ರಯೋಗಗಳನ್ನು ಪಟ್ಟಿ ಮಾಡಿಕೊಂಡು ಅವುಗಳ ಅನುಷ್ಠಾನಕ್ಕೆ ವಿಜ್ಞಾನ ಪ್ರಯೋಗದ ಕೈಪಿಡಿ ಬಳಕೆ ಮಾಡಿಕೊಂಡು ಗುಣಾತ್ಮಕ ಮತ್ತು ಪರಿಣಾಮಕಾರಿ ಕಲಿಕೆಗೆ ಸಿದ್ಧತೆ ಮಾಡಿಕೊಂಡಾಗ ಮುಟ್ಟಬೇಕಾದ ಗುರಿಯು ಸ್ಪಷ್ಟವಾಗಿ ಗೋಚರಿಸುವುದು.
* ವಿವಿಧ ಕ್ರೀಡೆಗಳು ಮತ್ತು ಕ್ರೀಡಾ ಸಾಮಗ್ರಿಗಳ ಪಟ್ಟಿ ತರಿಸಿಕೊಂಡು ನಮ್ಮ ಶಾರೀರಿಕ ಬೆಳವಣಿಗೆಗೆ  ಆಯಾಮ ನೀಡುವುದು.
* ಶಿಕ್ಷಕರು ರೋಗನಿರೋಧಕ ಶಕ್ತಿ ಹೆಚ್ಚಿಸಲು ತಮ್ಮ ತಮ್ಮ ಶಾಲಾ ಮಕ್ಕಳಿಗೆ ಆರೋಗ್ಯಕರವಾದ ಆಹಾರ ಸೇವನೆ ಹಾಗೂ ಮುಂಜಾಗೃತ ಕ್ರಮಗಳ ಬಗ್ಗೆ ದೂರವಾಣಿ ಕರೆ ಮೂಲಕ ಸಲಹೆ ನೀಡುವಂತಾಗಬೇಕು.
      ಶಿಕ್ಷಕ ನಿಲ್ಲದೆ ಉಪಕರಣಗಳಾಗಲಿ ವಿವಿಧ ಸಾಧನ - ತಂತ್ರಗಳಾಗಲಿ ಬೆಲೆ ಇಲ್ಲದಂತಾಗುತ್ತದೆ. ಒಬ್ಬ ನೈಜ ಶಿಕ್ಷಕ ತನ್ನ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುವುದರ ಮೂಲಕ ಇಚ್ಚಾಶಕ್ತಿಯೊಂದಿಗೆ ತನ್ನ ವೃತ್ತಿಯಲ್ಲಿ ಹೆಂಡತಿ ಹೆಚ್ಚಿಸಿಕೊಂಡು ದೃಢಸಂಕಲ್ಪದೊಂದಿಗೆ  ಹೆಜ್ಜೆಯನ್ನಿಡಬೇಕಾದದ್ದು ಅವಶ್ಯವೂ ಹೌದು, ಅನಿವಾರ್ಯವೂ ಹೌದು ಎಂದು ಹೇಳಬಹುದು.

               ರಚನೆ :- ಹೊನ್ನೂರಪ್ಪ. ಸಹಶಿಕ್ಷಕರು
                                  ಸರ್ಕಾರಿ ಪ್ರೌಢಶಾಲೆ ಕಲ್ಲಖೋರ
                                  ತಾ/ ಬಸವಕಲ್ಯಾಣ ಜಿ/ ಬೀದರ್.
        
    





Comments