ಅಸೈನ್ಮೆಂಟ್ 9 ಮನೆಯಿಂದಲೇ ಕೆಲಸ ದಡಿಯಲ್ಲಿ ಶಿಕ್ಷಕರು ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವ ಕುರಿತಂತೆ 400 ಪದಗಳ ಲೇಖನ. ಪೀಠಿಕೆ :- " ಕಲಿಕೆ ಎನ್ನುವುದು ನಿಂತ ನೀರಲ್ಲ ಅದು ಹರಿಯುವ ನದಿಯಂತೆ ಹಾಗೆಯೇ ವಿದ್ಯೆ ಎಂಬುದು ಎಂದಿಗೂ ಮುಗಿಯದ ಅಧ್ಯಾಯ ಅದೊಂದು ನಿರಂತರ ಪ್ರಕ್ರಿಯೆ" ಎನ್ನುವ ನುಡಿಯು ಕಲಿಕೆಯ ಮಹತ್ವವನ್ನು ಸಾರುತ್ತದೆ. ಶಿಕ್ಷಕ ಯಾವಾಗಲೂ ಸಮಾಜವನ್ನು ತಿದ್ದುವ, ದೇಶವನ್ನು ಕಟ್ಟುವ ನಿರ್ಮಾತೃ , ಇಂತಹ ಶಿಕ್ಷಕನ ಕಲಿಕೆಯು ಕ್ಷಣಿಕವಾಗಿ ನಿಂತರೆ ಮಮುಂದಿನ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ. ಹಾಗಾಗಿ ಒಬ್ಬ ಶಿಕ್ಷಕ ಯಾವಾಗಲೂ ವಿದ್ಯಾರ್ಥಿಯಾಗಿರುತ್ತಾನೆ. ಮಕ್ಕಳ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ಹಿರಿದು. ಮಕ್ಕಳಿಗೆ ಬೋಧಿಸುವುದು ಒಂದು ಕಲೆ. ಶಿಕ್ಷಕರು ಈ ಕಲೆಯಲ್ಲಿ ಪರಿಣಿತರಾಗಬೇಕು ಮಾನವನು ಇಂದಿನವರೆಗೂ ಕಳಿಸಿದ ಜ್ಞಾನ ಅಪಾರವಾದದ್ದು ಅದನ್ನು ಒಟ್ಟುಗೂಡಿಸಿ ಮಕ್ಕಳಿಗೆ ತಿಳಿ ಹೇಳಬೇಕಾದರೆ ಶಿಕ್ಷಕನ ನೈಪುಣ್ಯತೆ ಪರಿಪಕ್ವ ವಾಗಿರಬೇಕು. ಶಿಕ್ಷಕನು ಆಡಳಿತಗಾರನಾಗಿ, ಬೋಧಕರಾಗಿ, ಮಾರ್ಗದರ್ಶಕನಾಗಿ, ಮೇಲ್ವಿಚಾರಕನಾಗಿ, ಸ್ನೇಹಿತನಾಗಿ,ಸಮಾಜ ಸೇವಕನಾಗಿ ವಿವಿಧ ಬಹುಮುಖ ಪ್ರತಿಭೆ ಉಳ್ಳ ಪಾತ್ರ ನಿರ್ವಹಿಸುವನಾಗಿರುವನು. ವಿವರಣೆ :- ವೃತ್ತಿ ನೈಪುಣ್ಯತೆ ಸಾಮರ್ಥ್ಯವು ವೃತ್ತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ...